Down the memory lane-Nimbal(ನನ್ನ ಅಜ್ಜೆಯ ಉರು ನಿಂಬಾಳ)

Some time back, I had written article/blog on my childhood memories of my grandparents place called Nimbal in Karnataka. This was in Marathi. My wife, Anita, translated it to Kannada. During the translation process, she has enhanced it, and also we managed to get one new photo as well. Rest of the blog below is this Kannada version of the same article. Those who know Kannada, I hope you enjoy. Don’t forget to record your comments or share your memories of Nimbal on the blog itself. Thanks!

ನನ್ನ ಅಜ್ಜೆಯ ಉರು ನಿಂಬಾಳ

ನನ್ನ ಅಜ್ಜೆಯ ಮನೆ ಇರುವ ಉರು ನಿಂಬಾಳ ಕರ್ನಾಟಕದಲ್ಲಿ ಬಿಜಾಪುರ(ಈಗಿನ ವಿಜಯಪುರ) ಜಿಲ್ಲೆಯಲ್ಲಿದೆ. ಸೋಲಾಪುರದಿಂದ ೮೦ ಕಿಮಿ ದೂರಲ್ಲಿದೆ. ನಾವು ಎಲ್ಲರು ಶಾಲೆಯ ಪರೀಕ್ಷೆಯ ನಂತರ ಇರುವ ಬೇಸಗಿ ರಜೆಯಲ್ಲಿ ನಿಂಬಾಳಕ್ಕೇ ಹೋಗುತ್ತಿದ್ದೆವು. ಪುಣೆಯಿಂದ ಸೋಲಾಪುರಕ್ಕೆ ಎಕ್ಷ್ಪ್ರೆಸ ಟ್ರೈನ ಪ್ರವಾಸ, ಆಮೇಲೆ ದಕ್ಷಿಣ್ ಮಧ್ಯ ರೆಲ್ವೇಯ್ ಮೀಟರ್ ಗೇಜಿನ ಮೇಲೆ ಕಲ್ಲಿದ್ದಿಲಿನಿಂದ ಓಡುವ ರೈಲ್ಲಿನಿಂದ ಪ್ರವಾಸ ಮಾಡುತ್ತಿದ್ದೆವು. ಸೋಲಾಪೂರದಿಂದ ನಿಂಬಾಳದ ಪ್ರವಾಸವು ೪ ತಾಸಿನದು. ನಸುಬೆಳಕಿನಲ್ಲಿ ಸೋಲಾಪೂರದಿಂದ ಮೀಟರ್ ಗೇಜಿನ ಮೇಲೆ ಓಡುವ ಕಲ್ಲಿದ್ದಿಲಿನ ಇಂಜಿನ ಇರುವ ಗಾಡಿಯಲ್ಲಿ ಕುಳಿತರೆ ಬೆಳಗಿನ ಸಮಯದಲ್ಲಿ ನಿಂಬಾಳಕ್ಕೆ ತಲುಪುದ್ದಿದ್ದೆವು. ಈ ಗಾಡಿಯಲ್ಲಿ ನಸುಬೆಳಕಿನ ತಂಗಾಳಿಯಲ್ಲಿಯ ಪ್ರವಾಸವು ಅತ್ಯಂತ ಅಲ್ಲಾದಕರವಾಗಿರುತ್ತಿತ್ತು. ಕಲ್ಲಿದ್ದಿಲಿನ ಇಂಜಿನ ಮಾಡುವ ಒಂದು ವಿಶಿಷ್ಠ ಪ್ರಕಾರದ ಶಬ್ದ, ಬಿಡುವ ಹೋಗೆ, ಅದರ ಒಂದು ನಿಧಾನವಾದ ವೇಗ, ಸ್ವಲ್ಪ ಸ್ವಲ್ಪ ಬೆಳಗಾಗುವಾಗ ಕಾಣಿಸುವ ದೃಶ್ಯ, ಹೋಟಗಿ ಅಥವಾ ಇಂಡಿ ನಿಲ್ದಾಣದಲ್ಲಿ ಪೇಡೆ ಮಾರಾಟಗಾರರ ಕೂಗು ಇದೆಲ್ಲಾ ಬಹಳ ಮಜವಗಿರುತ್ತಿತ್ತು. ಮುಂದೆ ಮರಾಠಿ ಭಾಷೆ ಕಡಿಮೆಯಾಗುತ್ತಾ ಕನ್ನಡ ಭಾಷೆ ಹೆಚ್ಚಾಗಿ ಕೇಳಿ ಬರುತ್ತಿತ್ತು.

ಪತ್ರದ ಮೂಲಕ ನಾವು ಬರುವ ಸಮಾಚರವನ್ನು ಮೊದಲೇ ಅಜ್ಜಗೆ ತಳಿಸಿರುತ್ತಿದ್ದೆವು. ಅದರಂತೆಯೇ ನಮ್ಮನ್ನು ಕರೆದೊಯ್ಯಲು ನಿಂಬಾಳ ರೈಲು ನಿಲ್ದಾಣಕ್ಕೆ ಎತ್ತಿನ ಭಂಡಿ ಬರುತ್ತಿತ್ತು. ಬೆಳಿಗ್ಗೆ ಬೆಳೆಗ್ಗೆ ನಮ್ಮ ೧ ತಾಸಿನ ಪ್ರವಾಸ ಪ್ರಾರಂಭವಾಗುತ್ತಿತ್ತು. ಭಂಡಿ ಓಡಿಸುವವನ ಜೊತೆಗೆ ಮಾತುಕತೆ ನಡೆಯುತ್ತಿತ್ತು. ದಾರಿಯಲ್ಲಿ ಒಂದು ನಿರಿನ ಹಳ್ಳ ಇತ್ತು. ಎತ್ತುಗಳು ನೀರು ಕುಡಿಯಲು ಅಲ್ಲಿ ಖಂಡಿತವಾಗಿಯೂ ನಿಲ್ಲುತ್ತಿದ್ದವು. ಮುಂದೆ ಒಂದು ಕವಲು ದಾರಿ ನಮ್ಮ ತೋಟದ ಕಡೆಗೆ ಮತ್ತೊಂದು ನಮ್ಮ ಮನೆಯ ಕಡೆಗೆ ಹೋಗುತ್ತಿತ್ತು. ಸೋಲಾಪುರದ ನಂತರ ಬರುವ ಈ ಪ್ರದೇಶವು ಸ್ವಲ್ಪ ಬರ ಪೀಡಿತ ಪ್ರದೇಶ ಇದೆ. ಸಮತಲ ಪ್ರದೇಶ್, ಬಿಳಿ ಮಣ್ಣುನಿಂದ ಕೂಡಿದೆ. ಬಂಡಿಯಲ್ಲಿ ಮನೆಗೆ ಹೋಗುವ ಪ್ರಯಾಣದಲ್ಲಿ ನಮಗೆಲ್ಲರಿಗೂ ಈ ಮಣ್ಣಿನ ಲೆಪನವಾಗುತ್ತಿತ್ತು. ದಾರಿಯಲ್ಲಿ ಎರಡೂ ಬದಿಗೆ ಇರುವ ತೋಟಗಳು. ತೋಟಗಳ ಬೇಲಿಯ ಮೇಲೆ ಇರುವ ಕಳ್ಳಿ ಗಿಡಗಳ ಸಾಲುಗಳ ಜೋತೆ ಮನೆಯತನಕವು ಇರುತ್ತಿತ್ತು.

20150208_105136 20150208_105004

ಊರಿನ ಪ್ರವೇಶ ಮಾಡಿದ ಕೂಡಲೇ ಅಥವಾ ಪ್ರವೇಶದ ಸ್ವಲ್ಪ ಮುಂಚೆಯೇ ಅಜ್ಜಿಯ ಮನೆಯ ದರ್ಶನವಾಗುತ್ತಿತ್ತು. ಮನೆಯ ಎರಡು ಬದಿಯಲ್ಲಿರುವ ಹುಡೆಯು ಕಾಣಿಸುತ್ತಿತ್ತು. ಅಜ್ಜಿಯ ಮನೆ ನೆಲದ ಸಮತಲಕ್ಕಿಂತ ಸ್ವಲ್ಪ ಮೇಲೆ ಇತ್ತು. ಮನೆಯು ಎಷ್ಟು ಪುರಾತನವಾದದ್ದು ಎಂದು ಹೇಳುವದು ಕಷ್ಟ. ಆದರೆ ಅಜ್ಜ/ಅಜ್ಜಿಯ ಪೂರ್ವಜರು, ಅಥವಾ ಅದಕ್ಕೂ ಮೊದಲೇ ಮನೆಯನ್ನೂ ಕಟ್ತಿರಬಹುದು. ಮನೆಗೆ ಒಂದು ಕೋಟೆಯ ಸ್ವರೂಪ ಇತ್ತು. ಮನೆಯಲ್ಲಿ ಪರಂಪರೆಯಾಗಿ ಬಂದ ಪಾಟಿಲ ಕರಭಾರ ಇತ್ತು.ಅಜ್ಜನ ಅಡ್ಡಹೆಸರು ದೇಸಾಯಿ, ಅಂದರೆ ಊರಿನ ಪ್ರಮುಖ. ಮೊದಲು ಬಿಜಾಪುರ ಭಾಗದಲ್ಲಿ ಆದಿಲಶಾಹಿ ರಾಜ್ಯಭಾರ ಇತ್ತು. ಸುರಕ್ಷತೆಯ ದೃಷ್ಟಿಯಿಂದ ಇರಬಹುದು ಮೊದಲೇ ಹೇಳಿದಹಾಗೆ ಮನೆಯು ಸ್ವಲ್ಪ ಎತ್ತರದಲ್ಲಿ ಇತ್ತು. ಎರಡು ಬದಿಯಲ್ಲಿ ದೊಡ್ಡದಾದ ಹುಡೆಗಳು ತಲೆಎತ್ತಿ ನಿಂತಿದ್ದವು. ಆ ಎರಡು ಹುಡೆಗಳ ಮಧ್ಯೆ ೨೫-೩೦ ಅಡಿಗಳ ಉದ್ದವಾದ ಗೋಡೆ ಮೊದಲು ಇರಬಹುದು.ಏಕೆಂದರೆ ಗೋಡೆಯ ಮುರಿದ ಭಾಗ ಕಾಣುತ್ತಿತ್ತು. ಎಡಬದಿಯ ಹುಡೆಯ ಗೋಡೆಯ ಮೇಲಿನ ಭಾಗದಿಂದ ಒಂದು ದಾರಿ ಮನೆಯ ಬಾಗಿಲಿಗೆ ಹೋಗುತ್ತಿತ್ತು. ಗೋಡೆಯ ಬಲಬದಿಯಲ್ಲಿ ಒಂದು ಕಲ್ಲಿನ ಕಮಾನು ಇತ್ತು. ಅದಕ್ಕೆ ಮೊದಲು ಒಂದು ದೂಡ್ಡ ಬಾಗಿಲು ಇತ್ತು. ಮೊದಲು ಅದೆ ಮುಖ್ಯ ಪ್ರವೇಶ ದ್ವಾರ ಇರಬಹುದು. ಮನೆಯ ಆ ಸೌರಕ್ಷಣೆ ಗೋಡೆಯಂತ್ತಿದ್ದ ಹುಡೆ ನೆಲದಿಂದ ೧೦ ಆಡಿ ಎತ್ತರದಲ್ಲಿ ಕಲ್ಲಿನಿಂದ, ಮೇಲಗಡೆ ಭಾಗ ಬಿಳಿಯ ಮಣ್ಣಿನಿಂದ ಕಟ್ಟಿತ್ತು. ಮನೆಯ ಎರಡೂ ಬದಿಯಲ್ಲಿ ಕಟ್ಟೆಗಳು ಇದ್ದವು. ಆದರ ಬದಿಯಲ್ಲಿ ಮುಖ್ಯವಾಗಿ ಆಕಳು ಮತ್ತು ಆಕಳು ಕರುಗಳನ್ನು ಕಟ್ಟುತ್ತಿದ್ದರು. ಕಟ್ಟೆಯ ಮೇಲೆ ನಿಂತರೆ ದೊರದಲ್ಲಿ ಹೋಗುವ ರೈಲು ಕಾಣುತ್ತಿತ್ತು. ಸಾಧಾರಣವಾಗಿ ಮಧ್ಯಾನ್ಹ ೧೨ ಘಂಟೆಯ ಸಮಯದಲ್ಲಿ ಒಂದು ರೈಲು ಹೋಗುತ್ತಿತ್ತು, ಅದಕ್ಕೆ ಟಪಾಲ ಗಾಡಿ ಎಂದು ಕರೆಯುವದು ರೂಢಿ. ಕಲ್ಲಿದ್ದಿಲಿನ ಇಂಜಿನ ಶಬ್ದ, ರೈಲೀನ ಸೀಟೀಯ ಕೂಗು ದೊರದಿಂದ ಕೇಳಿ ಬರುತ್ತಿತ್ತು. ಆಗ ನಾವೆಲ್ಲ ಮಕ್ಕಳು ಕಟ್ಟೆಯ ಮೇಲಿಂದ ನಿಧಾನವಾಗಿ ಹೋಗುವ ರೈಲನ್ನು ನೋಡುತ್ತಿದ್ದೆವು.

ಮನೆಯಂದರೆ ಒಂದು ಚೌಕಾಕಾರದ ವಾಡೆಯ ಸ್ವರುಪವನ್ನು ಹೊಂದ್ದಿತ್ತು. ಮಧ್ಯದಲ್ಲಿ ಬಯಲು ಅಂಗಳ ಮತ್ತು ನಾಲ್ಕು ಬದಿಯಲ್ಲಿ ಕೋಣೆಗಳು ಇದ್ದವು. ಒಳಗೆ ಪ್ರವೇಶ ಮಾಡಿದಕೊಡಲೇ ಅತಿಥಿಗಳು ಬಂದು ಹೋಗುವ ಕೋಣೆ ಮತ್ತು ಬಲಬದಿಯಲ್ಲಿ ಅಜ್ಜನ ಕೋಣೆ ಇತ್ತು. ಅಜ್ಜನ ನಂತರ ಆ ಕೋಣೆಯನ್ನು ಗೋದಾಮದಂತೆ ಉಪಯೋಗಿಸುತ್ತಿದ್ದರು. ಬೇಸಿಗೆಯ ಕಾಲದಲ್ಲಿ ಅಲ್ಲಿ ಮಾವಿನ ಹಣ್ಣುಗಳ ಆಡಿಯನ್ನು ಹಾಕಲಾಗುತ್ತಿತ್ತು. ಅದು ಯಾವಾಗಲು ಮುಚ್ಚಿರುತ್ತಿತ್ತು. ಅದರ ನಂತರ ಮುಂದೆ ಅಂಗಳ. ಅಂಗಳದ ಬಲಬದಿಯಲ್ಲಿ ಕೆಳಗೆ ಇಳಿಯಲು ಮೆಟ್ಟಿಲುಗಳು ಇದ್ದವು. ಅಲ್ಲಿ ಕೆಳಗಡೆ ಒಂದು ಗುಪ್ತ ನೆಲಮಾರ್ಗ ಇತ್ತು ಮತ್ತು ಅಲ್ಲಿ ಆಯುಧಗಳನ್ನು ಇಡಲಾಗುತ್ತಿತ್ತು ಎಂದು ಹೇಳುವ ವಾಡಿಕೆ ಇತ್ತು. ಅದು ಯಾವಾಗಲು ಒಂದು ಚಿಕಿಸ್ಥಕ ವಿಚಾರವಾಗಿತ್ತು. ಮುಂದೆ ಎಡಬದಿಯಲ್ಲಿನ ಕೊನೆಯಲ್ಲಿ ಆಕಳುಗಳಿಗೆ ಬೇಕಾಗುವ ಮೇವನ್ನು ಇಡಲಾಗುತ್ತಿತ್ತು. ಮಧ್ಯಾನ್ಹದ ವೇಳೆಯಲ್ಲಿ ನಾವೆಲ್ಲ ಮಕ್ಕಳು ಅಲ್ಲಿ ಆಟ (ಇಸ್ಪೀಟ್, ಕವಡಿ) ಆಡುತ್ತಿದ್ದೆವು. ನಂತರ ಒಂದು ದೊಡ್ಡ ಅಡ್ಡ ಕೋಣೆ ಇತ್ತು. ಅದರಲ್ಲಿ ಎಲ್ಲ ಕೋಣೆಗಳಿಗಿಂತ ಹೆಚ್ಚು ಚಲನವಲನ ಇರುತ್ತಿತ್ತು. ಅಲ್ಲಿಯೇ ಬೆಳಗ್ಗಿನ ತಿಂಡಿ,ಮಧ್ಯಾನ್ಹದ ಊಟ ಮತ್ತು ಜೊಂಪು ಇವೆಲ್ಲ ನಡೆಯುತ್ತಿದ್ದವು, ಕೆವಲರು ರಾತ್ರಿಯ ವೇಳೆಯಲ್ಲಿ ಅಲ್ಲೆಯೇ ನಿದ್ರೆ ಮಾಡುತಿದ್ದರು. ಅಲ್ಲಿಯೇ ಮನೆಯಲ್ಲಿರುವ ಒಂದೇ ಒಂದು ಕನ್ನಡಿ ಗೂಟದಲ್ಲಿ ನೇತಾಡುತ್ತಿತ್ತು. ಎಡಬದಿಯಿಂದ ಮುಂದೆ ಹೋದರೆ ಅಡಿಯಮನೆ ಮತ್ತು ದೇವರಮನೆ. ಪಡಸಾಲೆಯ ಬಲಬದಿಯಿಂದ ಮುಂದೆ ಹೋದರೆ ಒಂದು ಕತ್ತಲೆ ಕೋಣೆ-ಅದಕ್ಕೆ ಬಾಣಂತಿ ಕೋಣೆ ಎಂದು ಕರೆಯುತ್ತಿದ್ದರು. ಮನೆಯಲ್ಲಿನ ಬಹಳ ಮಕ್ಕಳಲು ಇಲ್ಲೆಯೇ ಜನಿಸಿದರು ಎಂದು ಹೇಳಬಹುದು. ಅದರ ಮುಂದೆ ಸ್ನಾನದ ಕೋಣೆ. ಅದರ ಬದಿಯಲ್ಲಿ ತುಳಸಿ ವೃಂದಾವನ, ಕೈತೋಟ ಮತ್ತು ಮುಂದೆ ಬಿಳಿ ಮಣ್ಣಿನ ಗೋಡೆ. ಮನೆಯ ನೆಲ ಪೂರ್ಣವಾಗಿ ಸೆಗಣಿಯಿಂದ ಸಾರಿಸಲ್ಪತ್ತಿತ್ತು. ಮನೆಯ ಗೋಡೆಗಳು ದಪ್ಪಗೆ ಇದ್ದವು.

ಬೆಳಿಗ್ಗೆ ನಿದ್ದೆಯಿಂದ ಎದ್ದ ಕೊಡಲೇ ಕೊಡಲಿಯಿಂದ ಕಟ್ಟಿಗೆ ಕಡಿಯುವ ಶಬ್ದ ಕೇಳಿ ಬರುತ್ತಿತ್ತು. ಅದು ನಮ್ಮ ಮಾವ ಮಾಡುವ ಕೆಲಸವಾಗಿತ್ತು. ಅವರು ಮೊದಲು ಸೈನ್ಯದಲ್ಲಿ ಕೆಲಸಮಾಡುತ್ತಿದ್ದರು. ಜಾನುವಾರುಗಳಿಗೆ ತಿನ್ನಲು ಕೊಡಲು ಮೇವು ಮನೆಯಲ್ಲಿಯೇ ಇರುತ್ತಿತ್ತು. ಮಾವನು ಮೇವನ್ನು ಮತ್ತು ನೀರನ್ನು ಜಾನುವಾರುಗಳಿಗೆ ಕೊಡುತ್ತಿದ್ದನು.ನಾವು ಆವರ ಹಿಂದೆ ಓಡಾಡಿಕೊಂಡು ಇರುತ್ತಿದ್ದೆವು. ಸ್ವಲ್ಪ ಸಮಯದ ನಂತರ ಕುರುಬ ಬಂದು ಜಾನುವಾರಗಳನ್ನು ಮೇಯಲು ಕರೆದೊಯುತ್ತಿದ್ದನು. ಶೆಗಣಿಯಿಂದ ಮನೆಯನ್ನು ಸಾರಿಸುವದು, ಊರಿನ ಭಾವಿಗೆ ಹೋಗಿ ನೀರು ತರುವದು ಮುಂತಾದ ಕೆಲಸಗಳು ಮನೆಯಲ್ಲಿ ನಡೆಯುತ್ತಿದ್ದವು. ಆಗ ನಾವು ದೊಡ್ಡವರ ಜೊತೇ ಭಾವಿಗೆ ನೀರು ಸೇದಲು ಉದ್ದವಾದ ಹಗ್ಗವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ತಿಂಡಿಗೆ ಜೋಳದ ಅಳ್ಳಿಟ್ಟಿನ ಸಿಹಿ ಅಥವಾ ಖಾರದ ಪ್ರಕಾರ ಇರುತ್ತಿತ್ತು. ಆಮೇಲೆ ನಾವೆಲ್ಲರೂ ಹೋಲದ ದಾರಿಯನ್ನು ಹಿಡಿಯುತ್ತಿದ್ದೆವು. ಈಜಲು ೧೦-೧೨ ಮಕ್ಕಳ ಗುಂಪು ೨-೩ ಕಿ. ಮಿ. ದೂರದಲ್ಲಿ ಇರುವ ಭಾವಿಯ ಕಡೆಗೆ ಹೋಗುತ್ತಿದ್ದೆವು. ಅಲ್ಲಿ ಮನತುಂಬುವರೆಗೂ ಈಜುತ್ತಿದ್ದೆವು ಮತ್ತು ಬಹಳ ಸಂತೋಷ ಪಡುತ್ತಿದ್ದೆವು. ಆಮೇಲೆ ಮಧ್ಯಾನ್ಹ ಮನೆಗೆ ಬಂದ ಮೇಲೆ ಪತ್ತೆ ಮತ್ತು ಗೋಲಿ ಆಟ ಆಡುತ್ತಿದ್ದೆವು. ಬಸಿಗೆಯಲ್ಲಿ ಊಟಕ್ಕೆ ಮಾವಿನ ಹಣ್ಣಿನ ರಸವು ಸಾಮಾನ್ಯವಾಗಿ ಇರುತ್ತಿತ್ತು. ಮನೆಯ ಚಿಪು ಮಾವಿನ ಹಣ್ಣುಗಳು ಬಹಳ ರಸಭರಿತ ಹಾಗು ಸ್ವಾದಿಷ್ಟವಾಗಿತ್ತಿದ್ದವು. ಮಧ್ಯಾನ್ಹ ವೇಳೆಯಲ್ಲಿ ನನ್ನ ಮಾವ ಬೆಲ್ಲದ ಚಹಾ ಮಾಡಿಕೊಂಡು ಕುಡಿಯುತ್ತಿದ್ದರು. ಅದರಲ್ಲಿ ನಮಗೂ ಸ್ವಲ್ಪಪಾಲು ರುಚಿ ನೋಡಲು ಸಿಗುತ್ತಿತ್ತು. ಎಲ್ಲರೂ ಮಧ್ಯಾನ್ಹದ ವಿಶ್ರಾಂತಿ ಅಥವಾ ಜೋಂಪು ನಿದ್ದೆಯಲ್ಲಿ ಇರುವಾಗ ನಾವೆಲ್ಲಾ ಮಕ್ಕಳು ಮನೆಯಲ್ಲಿ ಅಥವಾ ಮನೆಯ ಹೊರಗೆ ಆಟ ಆಡಿಕೊಂಡು ಇರುತ್ತಿತ್ತೆವು. ಮುಖ್ಯದ್ವಾರದ ಮುಂದೆ ಒಂದು ದೊಡ್ಡ ಬೇವಿನ ಮರ ಇತ್ತು. ಆ ಗಿಡದ ಅಂಟನ್ನು ತೆಗೆಯುವ ಕೆಲಸ ನಡೆಯುತ್ತಿತ್ತು. ಆ ಗಿಡದ ಬದಿಯಲ್ಲಿ ಒಂದು ಮಾರುತಿ (ಹನುಮಂತನ) ಗುಡಿ ಇದೆ. ಗುಡಿಯಲ್ಲಿ ಮಾರುತಿಯ ಐದು ಮುಖದ ತಾಂತ್ರಿಕ ಮೂರ್ತಿ ನಿಂತ ಭಂಗಿಯಲ್ಲಿದೆ ಇದೆ. ಕೆಲವು ವರ್ಷಗಳ ಮುಂಚೆ ಈ ಗುಡಿಯ ಜೀರ್ಣೋದ್ಧಾರವನ್ನು ಮಾಡಲಾಗಿದೆ. ಅಲ್ಲಿಯೇ ನೆರಳಿನಲ್ಲಿ ಅಡಿಕೊಂದಿರುತ್ತೆದ್ದಿವು.

ಕೆಲ್ಲವಮ್ಮೆ ಮಧ್ಯಾನ್ಹದ ವೇಳೆಯಲ್ಲಿ ಕಡಲೆಕಾಯಿ ಬೀಜದ ಸಿಪ್ಪೆ ತೆಗೆಯುವ ಕೆಲಸ, ಹುಣಸೆ ಹಣ್ಣಿನ ಬೀಜ ಬಿಡಿಸುವ ಕೆಲಸ ಅಥವಾ ಬಿಸುಕಲ್ಲಿನಿಂದ ಹಿಟ್ಟು ಬಿಸುವ ಕೆಲಸ ನಡೆಯುತ್ತಿತ್ತು. ಇನ್ನು ಕೆಲವು ಸಲ ನಾವು ಮನೆಯ ಹತ್ತಿರ ಇರುವ ಪುರಾತನಕಾಲದ ಶಂಕರನ ಗುಡಿಗೆ ಹೋಗುತ್ತಿದ್ದೆವು. ಆ ಚಾಲುಕ್ಯ ಕಾಲಿನ ಗುಡಿ ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿ ಅದರ ಮೇಲೆ ಶಿಲ್ಪ ಕೆತ್ತನೆಯನ್ನು ಮಾಡಲಾಗಿತ್ತು. ಬೆಸಿಗೆಯ ಮಧ್ಯಾನ್ಹದ ಧಗೆಯಲ್ಲಿ ತುಲನಾತ್ಮಕವಾಗಿ ಅಲ್ಲಿ ತಂಪಾಗಿರುತ್ತಿತ್ತು. ಬಹುದೊಡ್ಡದಾದ ನಂದಿ ಮೂರ್ತಿ, ಪ್ರವೇಶ ದ್ವಾರದಲ್ಲಿ ಆನೆ ಕೆತ್ತನೆ ಈತ್ತು, ಪಂಚಾಯತನದಲ್ಲಿಯ ಕೆಲವು ಮೂರ್ತಿಗಳು, ಕೆಲವು ಭಗ್ನ ಕೆತ್ತೆನೆಗಳು ಅಲ್ಲಲ್ಲಿ ಕಾಣುತ್ತಿದ್ದವು. ಬದಿಯಲ್ಲಿಯೇ ಒಂದು ದೊಡ್ಡ ಚೌಕಾರದ ಕಲ್ಲಿನ ಮತ್ತು ಮೆಟ್ಟಿಲುಗಳಿರುವ ದೊಡ್ಡ ಭಾವಿ ಇತ್ತು. ಈಗ ಗುಡಿ ಮತ್ತು ಭಾವಿ ಪುರಾತತ್ವ ಇಲಾಖೆಯ ಜವಾಬ್ದಾರಿಯಲ್ಲಿದೆ.

20150801_171631

ಸಂಜಯ ಹೊತ್ತಿನಲ್ಲಿ ಜಾನುವಾರಗಳು ಮರಳಿ ಮನೆಗೆ ಬರುತ್ತಿದ್ದವು. ಆಮೇಲೆ ಆಕಳು ಕರುಗಳಿಗೆ ಹಾಲು ಕುಡಿಸುವ ಗಡಿಬಿಡಿ ಶುರುವಾಗುತ್ತಿತ್ತು. ಮಾಮಿ ಅಥವಾ ಅಜ್ಜಿ ಆಕಳ ಹಾಲ್ಲನ್ನು ಕೆರೆಯುತ್ತಿದ್ದರು. ಇದೆಲ್ಲವೂ ನಮಗೆ ಬಹಳ ಮಜವಾಗಿರುತ್ತಿತ್ತು. ನಿಧಾನವಾಗಿ ಕತ್ತಲು ಆವರಿಸಲು ಶುರುವಾಗುತ್ತಿತ್ತು. ಆ ಸಮಯದಲ್ಲಿ ಮನೆಯಲ್ಲಿ ವಿಧ್ಯುತ ದೀಪಗಳು ಇರಲ್ಲಿಲ್ಲ, ಆದರೆ ಕಂದಿಲುಗಳನ್ನು ಬಳಸುತ್ತಿದ್ದರು. ಮನೆಯ ಹೆಂಗಸರು ಆ ಕಂದಿಲುಗಳ ಗಾಜನ್ನು ರಂಗೋಲಿಯಿಂದ ಸ್ವಚ್ಛ ಮಾಡುತ್ತಿದ್ದರು ಮತ್ತು ಅದರ ಬತ್ತಿಯನ್ನು ಸರಿಪಡಿಸಿ ದೀಪವನ್ನು ಬೆಳಗುತ್ತಿದ್ದರು. ನಂತರ ನಾವು ಮಾವನ ಒಂದು ಚಿಕ್ಕ ರೆಡೀಯೋವನ್ನು ಅವನ ಜೊತೆಗೆ ಅಂಗಳದಲ್ಲಿ ಕುಳಿತು ಕೇಳುತ್ತಿದ್ದೆವು. ಸಂಜಯ ಹೊತ್ತಿನಲ್ಲಿ ಒಲೆಯ ಮೇಲೆ ಅಡಿಗೆಯನ್ನು ಮಾಡುವ ಮಾಮಿ ಅಥವಾ ಅಜ್ಜಿಯ ಮಧ್ಯದಲ್ಲಿ ಓಡಾಡಿಕೊಂಡು ಇರುತ್ತಿದ್ದೆವು. ರಾತ್ರಿಯ ಊಟದ ನಂತರ ಅಂಗಳದಲ್ಲಿ ದೊಡ್ಡದಾದ ಕೌದಿಯನ್ನುಹಾಸಿಕೊಂಡು ಮಲಗುತ್ತಿದ್ದೆವು. ಮೇಲೆ ಕಾಣುವ ನಿರಭ್ರವಾದ ಆಕಾಶದಲ್ಲಿ ಮಿನಗುವ ನಕ್ಷತ್ರಗಳನ್ನು ಎಣಿಸುತ್ತಾ ಯಾವಾಗ ನಿದ್ರೆ ಮಾಡುತ್ತಿದ್ದೇವೋ ನಮಗೆ ಗೊತ್ತಾಗುತ್ತಿರಲಿಲ್ಲ.

ತಿಂಗಳ ರಜಾ ದಿನಗಳು ಹೀಗೆಯೇ ಕಳೇದ ನಂತರ ಮತ್ತೆ ಮನೆಗೆ ತಿರುಗಿ ಹೋಗುವ ದಿನ ಬಂದದ್ದೇ ತಿಳಿಯುತ್ತಿರಲಿಲ್ಲ. ಎತ್ತಿನಭಂಡಿಯಲ್ಲಿ ಸಾಮನುಗಳನ್ನು ತುಂಬಿಕೊಂಡು ನಿಂಬಾಳ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದೆವು. ರೈಲು ನಿಲ್ಧಾಣದ ಬದಿಯಲ್ಲಿ ಇದ್ದ ಗುರುದೇವ ರಾನಡೆ ಆಶ್ರಮಕ್ಕೆ ಹೋಗುತ್ತಿದ್ದೆವು. ಈಗಲೂ ಬಹಳ ಜನ ಭಕ್ತರು ರಾನಡೆ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಆಮೇಲೆ ರೈಲಿನಿಂದ ಸೋಲಾಪುರ ನಂತರ ಪುಣೆ ಹೀಗೆ ನಮ್ಮ ಪ್ರವಾಸ ಮುಕ್ತಾಯವಾಗುತ್ತಿತ್ತು. ಹೀಗೆಯೇ ನನ್ನ ಅಜ್ಜಿಯ ಮನೆಯಿಂದ ಮರಳಿ ಬರುವ ತನಕ ನಮ್ಮ ಶಾಲೆಯ ಪರೀಕ್ಷೆಯ ತಿರ್ಮಾನ ಬಂದಿರುತ್ತಿತ್ತು. ಆಮೇಲೆ ಮತ್ತೆ ನಮ್ಮ ದಿನಕ್ರಮ-ಶಾಲೆ, ಅಭ್ಯಾಸ ಅಧ್ಯಯನ ಮಾಡುತ್ತಾ ಮುಂದಿನ ಬೇಸಿಗೆಯ ರಜೆಗಾಗಿ ಕಾಯುತ್ತಿದ್ದೆವು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s